logo

Kshatriya Komarpanth Samaj

ಅಖಿಲ ಕೊಮಾರಪಂತ ಸಮಾಜ REG No. 332/83-84

logo  logo  logoNEWS:

Gokarn Rathotsava 2018 by Kshatriya Komarpanth Samaj

ಕ್ಷತ್ರೀಯ ಕೊಮಾರಪಂಥ ಸಮಾಜದ ಗತಕಾಲದಿಂದ ನಡೆಯುತ್ತಾ ಬಂದಿರುವ ಶ್ರೀ ಕ್ಷೇತ್ರ ಗೋಕರ್ಣದ ರಥೋತ್ಸವವೂ ಚೈತ್ರ ಬಹುಳ ಅಮವಾಸ್ಯೆ ದಿನಾಂಕ *15-04-2018 ಭಾನುವಾರ* ದಂದು ನೆರವೆರಿಸಲಾಗುವುದು.

=== *ಕಾರ್ಯಕ್ರಮದ ವಿವರ* ===
• ಬೆಳಿಗ್ಗೆ 9:00 ಘಂಟೆಗೆ ಸಮಾಜದ ಉನ್ನತಿಗೆ ಶತ ರುದ್ರ ಹವನ.
• ಪೂರ್ಣಾಹುತಿ ಮಧ್ಯಾಹ್ನ : 12:00 ಘಂಟೆಗೆ.
• ಶ್ರೀ ಶ್ರೀ ರಾಘವೇಶ್ವರ ಭಾರತಿ ತೀರ್ಥ ಸ್ವಾಮೀಜಿಯವರಿಂದ ನಮ್ಮ ಸಮಾಜಕ್ಕೆ ಆಶೀರ್ವಚನ.
• ಪ್ರಸಾದ ಭೋಜನ.

• ಸಂಜೆ 6 ಘಂಟೆಗೆ ರಥಬಿದಿಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರುವುದು.
• ಸಮಾಜದ ವತಿಯಿಂದ ಬೆಳ್ಳಿ ಕೊಡದಿಂದ ರುದ್ರಾಭೀಷೇಕ.
• ಪಲ್ಲಕ್ಕಿ ಮೂಲಕ ಶ್ರೀ ದೇವರ ಉತ್ಸವ ಮೂರ್ತಿ ರಥಾರೋಹಣ.
• ರಥೋತ್ಸವ.
• ಪ್ರಸಾದ ವಿತರಣೆ.

ಅಂದು ನಮ್ಮ ಸಮಾಜದ ಹಿರಿಯರು ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ನಡೆದುಕೊಂಡು ಬಂದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಆದ ಕಾರಣ, ಶ್ರೀಗಳು ನಮ್ಮ ಸಮಾಜದ ಶ್ರೇಯಸ್ಸು ಹಾಗೂ ಅಭಿವೃದ್ಧಿಗೆ ತಮ್ಮ ಆಶಿರ್ವಚನದ ಮೂಲಕ ನಮಗೆ ಮಾರ್ಗದರ್ಶನ ಮಾಡಲಿರುವರು.

ಈ ಎಲ್ಲಾ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಉಪಸ್ಥಿತರಿದ್ದು, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.

QUICK LINK

GalleryWEBSITE VISITORS HITS